Saturday, 30 January 2016

ಮರೆಯದೆ ಕ್ಷಮಿಸು ನೆನಪಾದರೆ

ಮರೆಯದೆ ಕ್ಷಮಿಸು ನೆನಪಾದರೆ
ಕನಸನು ಉರಿಸು ಇರುಳಾದರೆ
ನಿನದೇ ಹಿತವ ಬಯಸಿ ಒಲವೇ
ನಿನ್ನಿಂದ ದೂರ ಓಡುವೆ
ಮನಸಿದು ನೆನಪಿನ ಸಂಚಿಕೆ
ಪುಟವನ್ನು ತಿರುವಲು ಅಂಜಿಕೆ
ಮರೆಯದೆ ಕ್ಷಮಿಸು ನೆನಪಾದರೆ
ಕನಸನು ಉರಿಸು ಇರುಳಾದರೆ

ಇನ್ನೆಲ್ಲೂ ಕಾಣದ ತಲ್ಲೀನತೆ
ನಿನ್ನಲ್ಲೇ ಕಾಣುತ ಹೀಗಾಯಿತೆ?
ಕೈಯಿಂದ ಜಾರಿತೇನೋ ನನ್ನಯ ಕಥೆ
ಇಂದಲ್ಲ ನಾಳೆ ಸೇರುವಾಸೆಯಿಂದ ಬಾಳುವೆ
ಸಿಕ್ಕಾಗ ಎಲ್ಲಾ ಹೇಳುವೆ
ಮನಸಿದು ಮುಗಿಯದ ಸಾಗರ
ಇರುಳಲಿ ಅಲೆಗಳ ಜಾಗರ

ತಂಗಾಳಿ ತಂದಿದೆ ನಿನ್ನಾ ದನಿ
ಕಣ್ಣಲ್ಲಿ ಇಂಗಿದೆ ಸಣ್ಣ ಹನಿ
ನನ್ನಲ್ಲಿ ಮಂದಹಾಸವಾಗಿ ನಿಂತೆ ನೀ
ಕಣ್ಮುಚ್ಚದೇನೆ ನಿನ್ನ ದಾರಿಯನ್ನೇ ನೋಡುವೆ
ನಿನ್ನನ್ನು ಕಂಡೇ ತಿರುವೇ
ಮನಸಿದು ನಡೆಸಿದೆ ನಾಟಕ
ಬದುಕಲಿ ಕೆರಳಿಸಿ ಕೌತುಕ

ಮರೆಯದೆ ಕ್ಷಮಿಸು ನೆನಪಾದರೆ
ಕನಸನು ಉರಿಸು ಇರುಳಾದರೆ
ನಿನದೇ ಹಿತವ ಬಯಸಿ ಒಲವೇ
ನಿನ್ನಿಂದ ದೂರ ಓಡುವೆ
ಮನಸಿದು ನೆನಪಿನ ಸಂಚಿಕೆ
ಪುಟವನ್ನು ತಿರುವಲು ಅಂಜಿಕೆ
ಮರೆಯದೆ ಕ್ಷಮಿಸು ನೆನಪಾದರೆ
ಕನಸನು ಉರಿಸು ಇರುಳಾದರೆ

Wednesday, 6 January 2016

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು


ಹೇ ಹೇ ಹೇ ಹೇ...
ಹೋ ಹೋ ಹೋ ಹೋ...
ಹಾ ಹಾ ಹಾ.. ಹಾ......

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ ಜೀವನ ಸಾಗದು ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

ಸೂರ್ಯ ಬರದೆ ಕಮಲವೆಂದೂ ಅರಳದು
ಚಂದ್ರನಿರದೆ ತಾರೆಯೆಂದೂ ನಲಿಯದು
ಸೂರ್ಯ ಬರದೆ ಕಮಲವೆಂದೂ ಅರಳದು
ಚಂದ್ರನಿರದೆ ತಾರೆಯೆಂದೂ ನಲಿಯದು
ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲವು ಕಾಣದು ಮನವು ಅರಳದಿರಲು ಗೆಲವು ಕಾಣದು

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ ಜೀವನ ಸಾಗದು ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಕೂಡಿ ನಲಿವ ಆಸೆ ಮನದಿ ಕಾದಿದೆ
ಹಿತವು ಎಲ್ಲಿ ನಾವು ಬೇರೆ ಆದರೆ ಹಿತವು ಎಲ್ಲಿ ನಾವು ಬೇರೆ ಆದರೆ

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ ಜೀವನ ಸಾಗದು ಪಾವನ ಆಗದು
ಹಾ ಹಾ ಹಾಹಾ ಹಾ ಹಾ
ಹಾ ಹಾ ಹಾಹಾ ಹಾ ಹಾ