Tuesday, 15 August 2017

kere Eri

kere Eri

Lyrics: Yograj Bhat
Music: V. Harikrishna
Singer: Sonu Nigam
Movie: Mugulu nage

kere Eri myAl baMdu kuLitukoMDa
chaMdra aMgi bichchi
huDugi nenapAdAga bevaru jAsti
aMda kaNNu muchchi

yAr bittilla beLedilla ede tuMba
araLyAve kiDigEDi keMdAvare
nAv kanasalli heMgappa ArAmAgirabEku
hagalottE hiMgAdare?

hiMgE hiMdomme eMdO naDedaMte
suttA muttA maretu kuMte
hoMge maradalli hesaru kettiddu
matte matte nenapAdaMte

manada guDiyalli hachchikoMDiruve
oMdu eraDu mUru haNate
birugALi muMde bogase sAlalla
annOdanne nAnu marete

eraDu rEkhe sAlOdilla aMtanisi eLakoMDe
haNe mEle mUrnE gere
I badukalli yAvanU ArAmAgiralAra
haLe nenapE niMthOdare

tuMbA anisuvudu nannaMthA nanagU
prIti innU gottAgilla
haMgAgi nAnu nannA jotegEnE
jAsti EnU mAtADalla

oMdu sariyAda duHkha iradidre
kaNNu kUDA tuMbOdilla
uMbA prItisuve tuMTu tanavannu
gAMbhIryavE naMgAgalla

yAv kanasallU nAnaMtU yAvattU nODilla
yAr mElU baTTe bare
nA anisiddu hELiruve nanna huDigirE kShamisi
nIvellA siTTAdare

ಕೆರೆ ಏರಿ

ಕೆರೆ ಏರಿ


ಸಾಹಿತ್ಯ: ಯೋಗರಾಜ್ ಭಟ್
ಗಾಯನ: ಸೋನು ನಿಗಮ್
ಸಂಗೀತ: ವಿ. ಹರಿಕೃಷ್ಣ
ಚಿತ್ರ: ಮುಗುಳು ನಗೆ

ಕೆರೆ ಏರಿ ಮ್ಯಾಲ್ ಬಂದು ಕುಳಿತುಕೊಂಡ
ಚಂದ್ರ ಅಂಗಿ ಬಿಚ್ಚಿ
ಹುಡುಗಿ ನೆನಪಾದಾಗ ಬೆವರು ಜಾಸ್ತಿ
ಅಂದ ಕಣ್ಣು ಮುಚ್ಚಿ

ಯಾರ್ ಬಿತ್ತಿಲ್ಲ ಬೆಳೆದಿಲ್ಲ ಎದೆ ತುಂಬ
ಅರಳ್ಯಾವೆ ಕಿಡಿಗೇಡಿ ಕೆಂದಾವರೆ
ನಾವ್ ಕನಸಲ್ಲಿ ಹೆಂಗಪ್ಪ ಆರಾಮಾಗಿರಬೇಕು
ಹಗಲೊತ್ತೇ ಹಿಂಗಾದರೆ?

ಹಿಂಗೇ ಹಿಂದೊಮ್ಮೆ ಎಂದೋ ನಡೆದಂತೆ
ಸುತ್ತಾ ಮುತ್ತಾ ಮರೆತು ಕುಂತೆ
ಹೊಂಗೆ ಮರದಲ್ಲಿ ಹೆಸರು ಕೆತ್ತಿದ್ದು
ಮತ್ತೆ ಮತ್ತೆ ನೆನಪಾದಂತೆ

ಮನದ ಗುಡಿಯಲ್ಲಿ ಹಚ್ಚಿಕೊಂಡಿರುವೆ
ಒಂದು ಎರಡು ಮೂರು ಹಣತೆ
ಬಿರುಗಾಳಿ ಮುಂದೆ ಬೊಗಸೆ ಸಾಲಲ್ಲ
ಅನ್ನೋದನ್ನೆ ನಾನು ಮರೆತೆ

ಎರಡು ರೇಖೆ ಸಾಲೋದಿಲ್ಲ ಅಂತನಿಸಿ ಎಳಕೊಂಡೆ
ಹಣೆ ಮೇಲೆ ಮೂರ್ನೇ ಗೆರೆ
ಈ ಬದುಕಲ್ಲಿ ಯಾವನೂ ಆರಾಮಾಗಿರಲಾರ
ಹಳೆ ನೆನಪೇ ನಿಂಥೋದರೆ

ತುಂಬಾ ಅನಿಸುವುದು ನನ್ನಂಥಾ ನನಗೂ
ಪ್ರೀತಿ ಇನ್ನೂ ಗೊತ್ತಾಗಿಲ್ಲ
ಹಂಗಾಗಿ ನಾನು ನನ್ನಾ ಜೊತೆಗೇನೇ
ಜಾಸ್ತಿ ಏನೂ ಮಾತಾಡಲ್ಲ

ಒಂದು ಸರಿಯಾದ ದುಃಖ ಇರದಿದ್ರೆ
ಕಣ್ಣು ಕೂಡಾ ತುಂಬೋದಿಲ್ಲ
ಉಂಬಾ ಪ್ರೀತಿಸುವೆ ತುಂಟು ತನವನ್ನು
ಗಾಂಭೀರ್ಯವೇ ನಂಗಾಗಲ್ಲ

ಯಾವ್ ಕನಸಲ್ಲೂ ನಾನಂತೂ ಯಾವತ್ತೂ ನೋಡಿಲ್ಲ
ಯಾರ್ ಮೇಲೂ ಬಟ್ಟೆ ಬರೆ
ನಾ ಅನಿಸಿದ್ದು ಹೇಳಿರುವೆ ನನ್ನ ಹುಡಿಗಿರೇ ಕ್ಷಮಿಸಿ
ನೀವೆಲ್ಲಾ ಸಿಟ್ಟಾದರೆ


Saturday, 15 July 2017

boMbe hELutaite


Movie: Rajakumara
Lyrics: Santhosh Anandram
Music: V. Harikrishna

boMbe hELutaite
matte hELutaite
nInE rAjakumAra

hosa beLakoMdu hosilige baMdu
beLagide maneya managaLa iMdu
ArAdhisO rArAjisO rAjaratnanu

ADisiyE nODu
bILisiyE nODu
eMdU sOladu
sOtu taleya bAgadu

guDisale Agali
aramane Agali
ATavE nilladu
eMdU ATa nilladu

hiriyarE irali
kiriyarE barali
bEdhave tOradu
eMdU bEdha tOradu

ella iddu EnU illada hAge badukiruva
AkAsha nODada kaiya nenedu
prIti haMchiruva

joteyiru nInu appana hAge
haNNele kAyO vinayadi hIge
ninnanu paDeda nAvu punIta
bALu nagu naguta

tAnE uridu manege beLaku koDuva dIpavidu
naMdA dIpavE idu
ADisuvAtana karuNeya mEle
namma pAtravu samayada sUtra avanadu

oMdu muttina katheya hELitu I goMbe
A katheyallidda rAjanaMge nInu baMde
yOgavu omme baruvudu namage
yOgyate oMdE uLivudu konege
sUryanobba chaMdranobba
rAjanU obba I rAjanU obba

ಬೊಂಬೆ ಹೇಳುತೈತೆ

ಚಿತ್ರ: ರಾಜಕುಮಾರ
ಸಾಹಿತ್ಯ: ಸಂತೋಷ ಆನಂದ್ರಾಮ
ಸಂಗೀತ: ವಿ. ಹರಿಕೃಷ್ಣ
 
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೇ ರಾಜಕುಮಾರ

ಹೊಸ ಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೋ ರಾರಾಜಿಸೋ ರಾಜರತ್ನನು

ಆಡಿಸಿಯೇ ನೋಡು
ಬೀಳಿಸಿಯೇ ನೋಡು
ಎಂದೂ ಸೋಲದು
ಸೋತು ತಲೆಯ ಬಾಗದು

ಗುಡಿಸಲೆ ಆಗಲಿ
ಅರಮನೆ ಆಗಲಿ
ಆಟವೇ ನಿಲ್ಲದು
ಎಂದೂ ಆಟ ನಿಲ್ಲದು

ಹಿರಿಯರೇ ಇರಲಿ
ಕಿರಿಯರೇ ಬರಲಿ
ಬೇಧವೆ ತೋರದು
ಎಂದೂ ಬೇಧ ತೋರದು

ಎಲ್ಲ ಇದ್ದು ಏನೂ ಇಲ್ಲದ ಹಾಗೆ ಬದುಕಿರುವ
ಆಕಾಶ ನೋಡದ ಕೈಯ ನೆನೆದು
ಪ್ರೀತಿ ಹಂಚಿರುವ

ಜೊತೆಯಿರು ನೀನು ಅಪ್ಪನ ಹಾಗೆ
ಹಣ್ಣೆಲೆ ಕಾಯೋ ವಿನಯದಿ ಹೀಗೆ
ನಿನ್ನನು ಪಡೆದ ನಾವು ಪುನೀತ
ಬಾಳು ನಗು ನಗುತ

ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು
ನಂದಾ ದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ
ನಮ್ಮ ಪಾತ್ರವು ಸಮಯದ ಸೂತ್ರ ಅವನದು

ಒಂದು ಮುತ್ತಿನ ಕಥೆಯ ಹೇಳಿತು ಈ ಗೊಂಬೆ
ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ
ಯೋಗವು ಒಮ್ಮೆ ಬರುವುದು ನಮಗೆ
ಯೋಗ್ಯತೆ ಒಂದೇ ಉಳಿವುದು ಕೊನೆಗೆ
ಸೂರ್ಯನೊಬ್ಬ ಚಂದ್ರನೊಬ್ಬ
ರಾಜನೂ ಒಬ್ಬ ಈ ರಾಜನೂ ಒಬ್ಬ

English

Sunday, 30 April 2017

ಇಂದು ನಿನ್ನ ಎದುರಲಿ ಮಾತೇ ಬೇಡ ಅನಿಸಿದೆ

ಚಿತ್ರ: ಕಾಫಿ ತೋಟ
ಸಾಹಿತ್ಯ: ಜಯಂತ ಕಾಯ್ಕಿಣಿ

 
ಇಂದು ನಿನ್ನ ಎದುರಲಿ ಮಾತೇ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ
ಇದೇ ಥರ ಸತಾಯಿಸು ಇಗೋ ಮನ ತಯಾರಿದೆ

ಸೂರ್ಯನು ಕ್ಷಿತಿಜದ ಒಲೆಯನು ಉರಿಸಲು
ಪಡೆದನೇ ನಮ್ಮಲಿ ಕಿಡಿಯನು ಎರವಲು
ಮಿತಿ ಮೀರಿದೇ ಆಕರ್ಷಣೆ
ಹುಡುಕಾಡುತ ನಾ ನಿನ್ನನು
ಪಡೆದಂತಿದೆ ನಾ ನನ್ನನೇ
ಅನುರಾಗಕೀಗ ನೀನೇ ನನ್ನ ಭಾವ ಸಹಿತ ವಿವರಣೆ

ಅನುಕ್ಷಣ ನಿನ್ನನು ತಲುಪುವ ತಹತಹ
ಉಳಿದಿರೋ ಕಲಹವ ನಡೆಸುವೆ ಮುಖತಃ
ಶುರುವಾಗಿದೆ ನೀ ಬಲ್ಲೆಯಾ
ಎದೆಯಾಳದಿ ಸದ್ದಿಲ್ಲದೇ
ಸವಿನೆನಪಿನ ಕಾರ್ಯಾಲಯ
ಇರಲಾರೆ ಇನ್ನು ದೂರ ನಾನು ಅದುವೇ ನನ್ನ ಪರಿಚಯ

Saturday, 7 January 2017

ಬ್ಯೂಟಿಫುಲ್ ಮನಸುಗಳು

ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೇ ಚಂದ
ಮಾರ್ಕೆಟ್ ರೋಡಲ್ಲಿ ಬಾಸ್ಕೆಟ್ ಹಿಡ್ಕೊಂಡು ನಮ್ ಹುಡ್ಗಿ ನಡೆಯೋದೇ ಅಂದ
ಮಾದೇವ್ನ ಜಾತ್ರೇಲಿ ಮುಳುಗ್ಹೋಗ್ಲಿ ಊರು
ಬೆರಳ್ಹಿಡಿದು ನಡಿತೀವಿ ನಾಚ್ಬೇಕು ತೇರು
ಬಡಿಸೋಳೆ ಕನ್ಸು ನೂರಾರು
ಮರೆತ್ಹೋಯ್ತು ಮುದ್ದೆ ಬಸ್ಸಾರು

ತುಟಿ ಮೇಲೆ ಜೇನು ಕೆಂದಾವರೆ ಶೈನು
ಮಾತೆಲ್ಲ ಮಿನಿ ಕೋಗಿಲೆ ಟ್ಯೂನು
ಮುದ್ದಾದ ಕಣ್ಣು ಏನ್ಹೇಳ್ಲಿ ನಾನು
ಹುಬ್ಬೆರಡೂ ರಂಗೋಲಿ ಲೈನು
ಆ ಕಿರು ನೋಟ ಮತ್ತೇರಿಸೋ ವೈನು
ಬಿದ್ದಾಯ್ತು ಕಾಡಿಗೆಯ ಸೈನು
ಮುತ್ತಲ್ಲೇ ಕಟ್ಟುವೆನು ಫೈನು

ನಾಕಾಣೆಯಲ್ಲೂ ಚೌಕಾಸಿ ಮಾಡಿ ನಡಸ್ತಾಳೆ ಸಂಸಾರ ನೌಕೆ
ಶೋಕಿಗೆ ಸಾಲ ಶೋಕಕ್ಕೆ ಮೂಲ
ಅಂತಾಳೆ ಆಗಾಗ ಈಕೆ
ನೀ ನನ್ನ ಉಳಿತಾಯ ಶಾಖೆ
ಇದಕ್ಕಿಂತ ಸೌಭಾಗ್ಯ ಬೇಕೇ
ಈ ನಿನ್ನ ಸಾಂಗತ್ಯ ಸಾಕೆ

ಬಡವನಾದರೆ ಏನು ಪ್ರಿಯೆ

ಬಡವನಾದರೆ ಏನು ಪ್ರಿಯೆ
ಕೈ ತುತ್ತು ತಿನ್ನಿಸುವೆ
ಎದೆಯ ತುಂಬಾ ಒತ್ತಿಕೊಂಡು
ಮುತ್ತು ಮಳೆಯ ಸುರಿಸುವೆ

ನನ್ನ ಎದೆಯ ರಾಜ್ಯದಲ್ಲಿ
ನೀನು ರಾಣಿ ಆಗುವೆ
ಪುಟ್ಟ ಗುಡಿಸಲಲ್ಲಿ ನಿನ್ನ
ಪಟ್ಟದರಸಿ ಮಾಡುವೆ

ಉಳ್ಳವರ ಎದೆಗೆ ಒದ್ದು
ಮೈ-ಮಾನ ಮುಚ್ಚುವೆ
ರಟ್ಟೆ ಮೇಲೆ ಹೊತ್ತು ನಿನ್ನ
ಜಗವ ಸುತ್ತಿ ತಣಿಸುವೆ

ಬೆವರು ಹರಿಸಿ ಹೂವ ಬೆಳೆಸಿ
ಮುಡಿಯಲ್ಲಿಟ್ಟು ನಗಿಸುವೆ
ಭುಜಕೆ ಭುಜವ ಹಚ್ಚಿ ನಿಂತು
ತೋಳು ಬಂಧಿ ತೊಡಿಸುವೆ

ಹರಿವ ನದಿಗೆ ಅಡ್ಡ ನಿಂತು
ನಿನಗೆ ದಾರಿ ಮಾಡುವೆ
ಬಿಸಿಲು ಮಳೆಯ ಚಳಿಯ ನುಂಗಿ
ನೆರಳು ಬೆಳಕು ಆಗುವೆ