Showing posts with label kaffi thota lyrics. Show all posts
Showing posts with label kaffi thota lyrics. Show all posts

Sunday, 30 April 2017

ಇಂದು ನಿನ್ನ ಎದುರಲಿ ಮಾತೇ ಬೇಡ ಅನಿಸಿದೆ

ಚಿತ್ರ: ಕಾಫಿ ತೋಟ
ಸಾಹಿತ್ಯ: ಜಯಂತ ಕಾಯ್ಕಿಣಿ

 
ಇಂದು ನಿನ್ನ ಎದುರಲಿ ಮಾತೇ ಬೇಡ ಅನಿಸಿದೆ
ನಿನ್ನ ಚಂದ ಹೆರಳಲಿ ಒಂಟಿ ಸ್ವಪ್ನ ಸಿಲುಕಿದೆ
ಇದೇ ಥರ ಸತಾಯಿಸು ಇಗೋ ಮನ ತಯಾರಿದೆ

ಸೂರ್ಯನು ಕ್ಷಿತಿಜದ ಒಲೆಯನು ಉರಿಸಲು
ಪಡೆದನೇ ನಮ್ಮಲಿ ಕಿಡಿಯನು ಎರವಲು
ಮಿತಿ ಮೀರಿದೇ ಆಕರ್ಷಣೆ
ಹುಡುಕಾಡುತ ನಾ ನಿನ್ನನು
ಪಡೆದಂತಿದೆ ನಾ ನನ್ನನೇ
ಅನುರಾಗಕೀಗ ನೀನೇ ನನ್ನ ಭಾವ ಸಹಿತ ವಿವರಣೆ

ಅನುಕ್ಷಣ ನಿನ್ನನು ತಲುಪುವ ತಹತಹ
ಉಳಿದಿರೋ ಕಲಹವ ನಡೆಸುವೆ ಮುಖತಃ
ಶುರುವಾಗಿದೆ ನೀ ಬಲ್ಲೆಯಾ
ಎದೆಯಾಳದಿ ಸದ್ದಿಲ್ಲದೇ
ಸವಿನೆನಪಿನ ಕಾರ್ಯಾಲಯ
ಇರಲಾರೆ ಇನ್ನು ದೂರ ನಾನು ಅದುವೇ ನನ್ನ ಪರಿಚಯ